ಅಭಿಪ್ರಾಯ / ಸಲಹೆಗಳು

ಲಿಂಬೆ ಹಣ್ಣಿನ ವಿವಿಧ ತಳಿಗಳು

ಕಾಗಜಿ ಲಿಂಬೆ:

 ಈ ತಳಿಯ ಹಣ್ಣುಗಳು ದುಂಡಗಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಸಿಪ್ಪೆಯ ಪಡಣ್ಣಿಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಪ್ರತಿ ಹಣ್ಣಿನಲ್ಲಿ 10 ರಿಂದ 12 ಭಾಗಗಳಿರುತ್ತವೆ ಹಣ್ಣಿನ ರಸ ಸುಳೆಯಾಗಿದ್ದು, ವಿಶಿಷ್ಟ ಸುವಾಸನೆ ಹೊಂದಿರುತ್ತದೆ.

 

ಪ್ರಮಾಲಿನಿ:

ಈ ತಳಿಯನ್ನು ಮಧ್ಯ ಮಹಾರಾಷ್ಟ್ರ ಭಾಗದಿಂದ ಕಾಗಜಿ ಲಿಂಬೆ ಯಿಂದ ಆಯ್ಕೆ ಮಾಡಲಾಗಿದೆ, ಹಣ್ಣುಗಳು ಮಧ್ಯಮ ಗಾತ್ರ ಮತ್ತು ಆಕರ್ಷಕ ಬಣ್ಣ ಹೊಂದಿರುತ್ತದೆ. ಲಿಂಬೆಯ ಕಜ್ಜಿರೋಗಕ್ಕೆ ಸಹಿಷ್ಣುತೆಯನ್ನು ಹೊಂದಿದೆ. ಈ ತಳಿಯ ಗಿಡಗಳಲ್ಲಿ 3 ರಿಂದ 7 ಹಬ್ಬಗಳ ಗೊಂಚಲಿನಲ್ಲಿ ಹಣ್ಣು ಬಿಡುತ್ತವೆ ಮತ್ತು ಹಣ್ಣಿನಲ್ಲಿ ರಸ ಕೂಡ ಹೆಚ್ಚಾಗಿರುತ್ತದೆ,

 

ಸಾಯಿ ಶರಬತಿ :

ಇದೂ ಕೂಡ ಕಾಗಜಿ. ಲಿಂಬೆಯ ಆಯ್ಕೆಯಾಗಿದ್ದು, ಹೆಚ್ಚಿನ ಇಳುವರಿ ನೀಡುವ ತಳಿಯಾಗಿದೆ. ಈ ತಳಿಯೂ ಕೂಡ ಲಿಂಬೆಯ ಕಜ್ಜಿರೋಗಕ್ಕೆ ಸಹಿಷ್ಣುತೆ ಹೊಂದಿರುತ್ತದೆ, ಸರಾಸರಿ ಇಳುವರಿ 1200 ಹಣ್ಣುಗಳು/ಗಿಡ/ವರ್ಷ ದಷ್ಟಿದೆ.

 

ವಿಕ್ರಮ್:

 ಇದೂ ಕೂಡ ಕಾಗಜಿ ಲಿಂಬೆಯ ಆಯ್ಕೆಯಾಗಿದ್ದು, 5 ದಿಂದ 10 ಹಣ್ಣುಗಳುಳ್ಳ ಗೊಂಚಲಿನಲ್ಲಿ ಹಣ್ಣು ಬಿಡುತ್ತದೆ. ಇದು ಕಾಗದೆ ಲಿಂಬೆಗಿಂತ ಶೇ.30-32 ರಷ್ಟು ಇಳುವರಿ ನೀಡುತ್ತದೆ.

 

ಬಾಲಾಜಿ:

 ಇದು ಆಂಧ್ರಪ್ರದೇಶದ ತೋಟಗಾರಿಕೆ ವಿಶ್ವವಿದ್ಯಾಲಯದ ತಿರುಪತಿ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾದ ತಳಿ. ಇದನ್ನು ತೆನಾಲಿ ತಳಿಯಿಂದ ಆಯ್ಕೆ ಮಾಡಲಾಗಿದೆ. ಹಣ್ಣುಗಳ ಗಾತ್ರ ಮಧ್ಯಮವಾಗಿದ್ದು, ಆಕರ್ಷಕ ಬಣ್ಣ ಹೊಂದಿರುತ್ತದೆ. ಇದು ಕಜ್ಜಿರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ,

 

ಪುಲೆ ಶರಬತಿ :

ಇದೂ ಕೂಡ ಕಾಗಜಿ ಲಿಂಬೆಯಿಂದ ಆಯ್ಕೆಯಾಗಿದ್ದು, ಸಾಯಿ ಶರಬತಿ ತಳಿಗಿಂತ ಶೇ. ರಷ್ಟು ಹೆಚ್ಚಿನ ಇಳುವರಿ ನೀಡುತ್ತದೆ. ಅಲ್ಲದೆ ಲಿಂಬೆಯ ಕಜ್ಜಿ ರೊಗಕ್ಕೆ ಸಹಿಷ್ಣುತೆ ಹೊಂದಿದೆ.

 

ಚಕ್ರಧಾರ:

ಇದು ಕಾಗಜಿ ಲಿಂಬೆ ತಳಿಯಿಂದ ಆಯ್ಕೆಯಾಗಿದೆ. ಈ ತಳಿಯ ಗಿಡದಲ್ಲಿ ಮುಳುಗಳಿರುವದಿಲ್ಲ ಹಾಗೂ ಹಣ್ಣಿನಲ್ಲಿ ಬೀಜಗಳಿರುವುದಿಲ್ಲ. ವಿಟಮಿನ್ 'A' ಆಂಶ 118.3 ರಿಂದ 140,8, ಮಿಗ್ರಾಂ /100 ಗ್ರಾಂ ಹಣ್ಣಿನ ರಷ್ಟಿದ್ದು, ಹುಳಿಯ ಅಂಶ ಶೇ. 8.68 ಅಂದ 9:08 ರಷ್ಟಿರುತ್ತದೆ.

 

ಜಯದೇವಿ:

ಈ ತಳಿಯನ್ನು ತಮಿಳುನಾಡಿನ ಪೆರಿಯಾಕುಲ‌ನಿಂದ ಆಯ್ಕೆ ಮಾಡಲಾಗಿದ್ದು, ಉತ್ತಮ ಗುಣಮಟ್ಟದ ರಸ ಮತ್ತು ಹೆಚ್ಚಿನ ಇಳುವರಿ (1500 ಹಣ್ಣಿನ ಗಿಡಕ್ಕೆ) ನೀಡುತ್ತದೆ. ಹಣ್ಣುಗಳು ತತ್ತಿಯಾಕಾರದಲ್ಲಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಹಣ್ಣಿನ ಬಣ್ಣ ಆಕರ್ಷಕ ಹಳದಿಯಾಗಿದ್ದು, ಎಲೆ ಸುರಂಗ ಹುಳು ಮತ್ತು ನಿಂಬೆ ಪತಂಗಕ್ಕೆ ಸಹಿಷ್ಣುತೆ ಹೊಂದಿದೆ.

ಇತ್ತೀಚಿನ ನವೀಕರಣ​ : 12-11-2020 02:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080