ಅಭಿಪ್ರಾಯ / ಸಲಹೆಗಳು

ರೋಗಗಳು ಮತ್ತು ಕೀಟಗಳ ನಿರ್ವಹಣೆ

 1. ಕಜ್ಜಿ ರೋಗ:

            ಈ ರೋಗದ ಲಕ್ಷಣವೆಂದರೆ 3-10 ಮಿ.ಮೀ. ಗಾತ್ರದ ಉಬ್ಬಿದ ಮತ್ತು ಆಳವಾದ ವರಟು ಮಚ್ಚೆಗಳು ಗಿಡದ ಎಲ್ಲಾ ಭಾಗಗಳ (ಕಾಂಡ, ಎಲೆ, ಮುಳ್ಳು ಮತ್ತು ಹಣ್ಣು) ಮೇಲೆ ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು ಹಣ್ಣಿನ ಸಿಪ್ಪೆಗೆ ಮಾತ್ರ ಸಿಮಿತವಾಗಿರುತ್ತವೆ ಮತ್ತು ಒಳಭಾಗಕ್ಕೆ ನೇರವಾಗಿ ಯಾವುದೇ ಹಾನಿ ಉಂಟು ಮಾಡುವುದಿಲ್ಲ.

 

 ಹತೋಟಿ ಕ್ರಮಗಳು:

ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಅಥವಾ ಬೋರ್ಡೋ ದ್ರಾವಣ ಶೇ.1 ಮತ್ತು ಸ್ಪಷ್ಟೊಸೈಕ್ಲಿನ್ 0.5 ಗ್ರಾಂನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು.

 

 1. ಅಂಟು ರೋಗ:

ಈ ರೋಗ ಭಾದಿತ ಗಿಡಗಳ ಕಾಂಡದಿಂದ ತಿಳಿ ಕಂದು ಬಣ್ಣದ ಅಂಟಿನಂತಹ ದ್ರಾವಣ ಸುರಿದು ನಂತರ ಗಟ್ಟಿಯಾಗಿ ಕ್ರಮೇಣವಾಗಿ ದಟ್ಟ ಕಂದು ಬಣ್ಣಕ್ಕೆ ತಿರುಗುತ್ತದೆ. ತೊಗಟೆಗಳಲ್ಲಿ ಸೀಳುಗಳು ಕಂಡುಬರುತ್ತವೆ. ಈ ರೋಗ ತೀವ್ರವಾದಲ್ಲಿ ತೊಗಟೆ ಸಂಪೂರ್ಣವಾಗಿ ಕೊಳೆತು ಗಿಡ ಸಾಯುತ್ತದೆ. ನೀರು ಸರಿಯಾಗಿ ಬಸಿದು ಹೋಗದೆ ಇರುವ ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ.

 

ಹತೋಟಿ ಕ್ರಮಗಳು:

 • ಅಂಟು ದ್ರಾವಣ ಕಂಡು ಬಂದ ಸ್ಥಳಗಳಲ್ಲಿ ಚಾಕುವುನಿಂದ ಸವರಿ ಬೋರ್ಡೋ ದ್ರಾವಣ / ಪೇಸ್ಟ್ ಅನ್ನು ಹಚ್ಚಬೇಕು.
 • ಈ ಸಮಸ್ಯೆ ತೀವ್ರವಾದಾಗ ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಬೇಕು.

 

 1. ಸೊರಗು ರೋಗ :

      ರೋಗ ತಗುಲಿದ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡ ಪೂರ್ತಿ ಒಣಗುತ್ತದೆ.

 

ಹತೋಟಿ ಕ್ರಮಗಳು:

 • ರೋಗ ತಗುಲಿದ ಗಿಡವನ್ನು ಕಿತ್ತು ನಾಶಪಡಿಸಬೇಕು.
 • ಹಳದಿ ಬಣ್ಣಕ್ಕೆ ತಿರುಗಿದ ಗಿಡಗಳನ್ನು ಗುರುತಿಸಿ ಅಂತಹ ಗಿಡಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ (ಬ್ಸೈಟ್ಯಾಕ್ಸ್) 3 ಗ್ರಾಂ. ಜೊತೆಗೆ ಕಾರ್ಬನ್‌ಡೈಜಿಮ್ 1 ಗ್ರಾಂ.ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ 3-4 ಲೀಟರ್ ದ್ರಾವಣವನ್ನು ಗಿಡಕ್ಕೆ ಹಾಕಿ ಮಣ್ಣಿನಿಂದ ಮುಚ್ಚಬೇಕು.
 • 15-20 ದಿನಗಳ ನಂತರ ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು 10 ಗ್ರಾಂ.ನ್ನು ಕೊಟ್ಟಿಗೆ ಗೊಬ್ಬರದ ಜೊತೆಗೆ ಮಿಶ್ರ ಮಾಡಿ ಹಾಕುವುದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.

 

 

 

 

 

 

 

ಕೀಟಗಳು

 1. ಎಲೆ ಸುರಂಗ ಹುಳು:

ಈ ಕೀಟದ ಮರಿಹುಳುಗಳು ಎಲೆಯೊಳಗೆ ಕೊರೆದು ತಿನ್ನುವುದರಿಂದ ಎಲೆಗಳ ಮೇಲೆ ಬಿಳಿಯ ಹಾವಿನ ಆಕೃತಿಯ ಮಚ್ಚೆಗಳನ್ನು ಕಾಣಬಹುದು. ಫೆಬ್ರುವರಿ-ಮಾರ್ಚ್, ಜೂನ್-ಜುಲೈ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈ ಕೀಟದ ಬಾಧೆಯು ಹೆಚ್ಚಾಗಿರುತ್ತದೆ.

 

ಹತೋಟಿ ಕ್ರಮಗಳು:

ಕೀಟನಾಶಕದ ಗುಣವುಳ್ಳ ಗಿಡಮೂಲಿಕೆ, ಸೆಗಣಿ ಮತ್ತು ಮೂತ್ರದಿಂದ ತಯಾರು ಮಾಡಿದ ಕಷಾಯವನ್ನು 1:3 ಅನುಪಾತದಲ್ಲಿ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಕೀಟದ ಹತೋಟಿ ಮಾಡಬಹುದು. ಇದಲ್ಲದೇ ಇಮಿಡಾಕ್ಲೋಪ್ರಿಡ್ 0.3ಮೀ.ಲಿ. ಅಥವಾ ಸೈಫರ್‌ಮೆಧ್ರನ್ 0.5ಮೀ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

 

 1. ನುಸಿ:

ಈ ಜೇಡ ನುಸಿಯ ಪ್ರೌಢ ಮತ್ತು ಮರಿಹುಳುಗಳು ಎಲೆಗಳ ಕೆಳಭಾಗದಿಂದ ರಸ ಹೀರುವುದರಿಂದ ಎಲೆಗಳ ಮೇಲೆ ಬಿಳಿ ಚುಕ್ಕೆಗಳನ್ನು ಕಾಣಬಹುದು. ಕೀಟವು ಎಲೆ, ಎಳೆಯ ಕಾಯಿ ಮತ್ತು ಹಸಿರು ತೊಗಟೆಯನ್ನು ತಿನ್ನುತ್ತದೆ.

 

ಹತೋಟಿ ಕ್ರಮಗಳು:

2.5 ಮಿ.ಲೀ. ಡೈಕೋಫಾಲ್ 20 ಇ.ಸಿ. ಅಥವಾ 0.7 ಮಿ.ಲೀ. ಫೆನಜಾಕ್ಸಿನ್ 10 ಇ.ಸಿ. ಅಥವಾ 2.0 ಮಿ.ಲೀ. ಇಥಿಯಾನ್ ಅಥವಾ 2.0 ಮಿ.ಲೀ. ಓಮ್ಮೆಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

 

 1. ಕಾಂಡ ಕೊರೆಯುವ ಹುಳು

 ಈ ಕೀಟದ ಮರಿ   ಹುಳುಗಳು ರೆಂಬೆ ಮತ್ತು ಕಾಂಡಗಳನ್ನು ಕೊರೆದು ತಿನ್ನುವುದರಿಂದ ಇಂತಹ ರೆಂಬೆಗಳು ಮತ್ತು ಗಿಡಗಳು ಒಣಗುತ್ತವೆ.

                       

 ಹತೋಟಿ ಕ್ರಮಗಳು:

            ಕಾಂಡ ಕೊರೆಯುವ ಹುಳದ ಬಾಧೆಯನ್ನು ತಡೆಗಟ್ಟಲು ಹುಳು ಕೊರೆದ ತೂತುಗಳಲ್ಲಿ ಡೈಕ್ಲೋರೋವಾಸ್ 15, ಇ.ಸಿ. 0.1% ಹಾಕಿ ಹಸಿ ಮಣ್ಣಿನಿಂದ ತೂತುಗಳನ್ನ ಮುಚ್ಚಬೇಕು.

ಇತ್ತೀಚಿನ ನವೀಕರಣ​ : 12-11-2020 02:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080