ಅಭಿಪ್ರಾಯ / ಸಲಹೆಗಳು

ಸ್ಥಾಪನೆ

  • ಲಿಂಬೆ ಬೆಳೆಯನ್ನು ಕಡಿಮೆ ಫಲವತ್ತತೆ ಜಮೀನಿನಲ್ಲಿ ಅತಿ ಕಡಿಮೆ ನೀರಿದ್ದರೂ ಸಹಾ ಬೆಳೆಯಬಹುದಾಗಿರುವ ಕಾರಣ ಮತ್ತು ಮಾರುಕಟ್ಟೆ ದರದಲ್ಲಿ ಕೂಡಾ ಹೆಚ್ಚಿನ ಏರಿಳಿತವಿರದ ಕಾರಣ ಸಣ್ಣ, ಅತೀ ಸಣ್ಣ ರೈತರು ಸಹಾ ಲಿಂಬೆ ಬೆಳೆಯಲು ಒಲವು ತೋರುತ್ತಿದ್ದು, ಕಳೆದ 3-4 ವರ್ಷಗಳಲ್ಲಿ 500-1000 ಹೇಕ್ಟರ ಪ್ರದೇಶ ವಿಸ್ತೀರ್ಣ ಹೆಚ್ಚಾಗಿರುತ್ತದೆ,

 

  • ಲಿಂಬೆ ಬೆಳೆಗೆ ಇರುವ ಬೇಡಿಕೆ, ಸಂಸ್ಕರಣಾ ಉತ್ಪನ್ನಗಳು, ವಿದೇಶಿ ವಿನಿಮಯ ಇತ್ಯಾದಿಗಳನ್ನು ಪರಿಗಣಿಸಿ ಸರ್ಕಾರವು, ಸರ್ಕಾರದ ಆದೇಶ ಸಂಖ್ಯೆ: ತೋ9146:ತೋಸವಿ:2016 ದಿನಾಂಕ:15.02.2017 ರಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ, ಸ್ಥಾಪಿಸಲು ಅನುಮತಿ ನೀಡಿದೆ.

 

  • ರಾಜ್ಯದಲ್ಲಿ ಲಿಂಬೆ ಮಂಡಳಿಯನ್ನು ದಿನಾಂಕ-15.02.2017ರ ಸರ್ಕಾರದ ಆದೇಶ ಸಂಖ್ಯೆ : ತೋಇ 146 ತೋಸವಿ 2016 ರ ಆದೇಶದನ್ವ ಯ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ಅಡಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ" ಎಂಬ ಹೆಸರಿನಲ್ಲಿ ನೋಂದಣಿ ಮಾಡಲಾಗಿದ್ದು, ದಿನಾಂಕ:16.05.2017 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ.

 

  • ರಾಜ್ಯದಲ್ಲಿ, ಲಿಂಬೆಯನ್ನೊಳಗೊಂಡಂತೆ, ಇತರೆ ಲಿಂಬೆ ಜಾತಿಯ ಕಿತ್ತಳೆ ಹಾಗೂ ಮೊಸಂಬಿ ಬೆಳೆಗಳ ಸಮಗ್ರ ಅಭಿವೃದ್ದಿಗಾಗಿ ಸ್ಕಾಪಿಸಿರುವ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಪ್ರಮುಖ ಉದ್ದೇಶಗಳನ್ನು ಈಡೇರಿಸಲು ಅನೂಕೂಲವಾಗುವಂತೆ ಹಾಗೂ ಸದರಿ ಮಂಡಳಿಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಸಲುವಾಗಿ, ಆಡಳಿತ ಮಂಡಳಿಯ ಕೇಂದ್ರ ಕಛೇರಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹೊಸದಾಗಿ ನಿರ್ಮಿಸಿದ ಮಿನಿ ವಿಧಾನಸೌಧದಲ್ಲಿ ಕೇಂದ್ರ ಕಛೇರಿ ಸ್ಕಾಪಿಸಲಾಗಿದೆ.

 

  • ಅದರಂತೆ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಆಡಳಿತ/ಕೇಂದ್ರ ಕಛೇರಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಹುದ್ದೆಗಳನ್ನು ಸೃಜಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಇಲಾಖೆಯಿಂದ ಮಂಜೂರಾತಿ ದೊರಕಿದ್ದು, ನಿಯೋಜನೆ ಮೇರೆಗೆ ಭರ್ತಿ ಮಾಡಲು ಸರ್ಕಾರ ಆದೇಶಿಸಿದೆ.

 

ಇತ್ತೀಚಿನ ನವೀಕರಣ​ : 02-01-2021 11:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080