ಅಭಿಪ್ರಾಯ / ಸಲಹೆಗಳು

ಸುಧಾರಿತ ಬೇಸಾಯ ಕ್ರಮಗಳು

ಹವಾಗುಣ ಮತ್ತು ಮಣ್ಣು:

ಸಮಶೀತೋಷ್ಣವಲಯದ ವಾತಾವರಣ ನಿಂಬೆ ಬೆಳೆಗೆ ಹೆಚ್ಚು ಸೂಕ್ತ. ಈ ಬೆಳೆಯ ಬೆಳವಣಿಗೆ ಹಂತದಲ್ಲಿಕಡಿಮೆ ಉಷ್ಣಾಂಶ ಹಾನಿಕಾರಕವಾಗುತ್ತದೆ. ಮಳೆಯ ಪ್ರಮಾಣ ವರ್ಷಕ್ಕೆ ಸರಾಸರಿ 700 ಮಿ. ಮೀ. ಇದ್ದಲ್ಲಿ ಈ ಬೆಳೆಗೆ ಉತ್ತಮವೆಂಬುದಾಗಿ ಕಂಡುಬಂದಿದೆ.ವಿಜಯಪುರ ಬಾಗಲಕೋಟೆ ಪ್ರದೇಶಗಳು ನೀರಾವರಿ ಆಶ್ರಯದಲ್ಲಿ ಬೆಳೆಯನ್ನು ಬೆಳೆಯಲು ಅತೀ ಯೋಗ್ಯವಾಗಿದೆ.

 

ನಿಂಬೆಯ ಬೇಸಾಯಕ್ಕೆ ಮಣ್ಣು ಕನಿಷ್ಟ 1.5 ರಿಂದ 2ಮೀ.ನಷ್ಟು ಆಳವಿದ್ದು ಉತ್ತಮ ಬಸಿಯುವಿಕೆಯನ್ನು ಹೊಂದಿರಬೇಕು. ಮಣ್ಣಿನ ರಸಸಾರ 5.5 ರಿಂದ 7 ಇದಕ್ಕೆ ಉತ್ತಮ. ಕ್ಷಾರ ಮಣ್ಣಿನಲ್ಲಿ ಸುಣ್ಣ ಹೆಚ್ಚಾಗಿದ್ದು ಲಘು ಪೋಷಕಾಂಶಗಳ ಕೊರತೆ ಕಂಡುಬರುವುದರಿಂದ ಈ ಬೆಳೆಗೆ ಸೂಕ್ತವಲ್ಲ. ನಾಟಿ ಮಾಡಲು ಜೂನ್- ಜುಲೈ ಅತೀ ಸೂಕ್ತ ಕಾಲ.

 

ಸಸ್ಯಾಭಿವೃದ್ಧಿ:

ನಿಂಬೆಯನ್ನು ಮುಖ್ಯವಾಗಿ ಬೀಜದಿಂದ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಇದಲ್ಲದೆ ನಿರ್ಲಿಂಗ ವಿಧಾನಗಳಿಂದ ಕಣ್ಣು ಹಾಕುವುದು, ಗೂಟಿ ವಿಧಾನ ಹಾಗೂ ಕಾಂಡ ಕತ್ತರಿಸಿದ ಭಾಗಗಳ ನಾಟಿ ವಿಧಾನಗಳಿಂದಲೂ ಸಸ್ಯಾಭಿವೃದ್ಧಿ ಮಾಡಬಹುದಾಗಿದೆ. ಸಸಿ 1 ಬೆಳೆಸಲು ಬೇಕಾಗುವ ಬಿತ್ತನೆ ಬೀಜವನ್ನು ಆರಿಸಲು ದೊಡ್ಡದಾದ, ರಸಭರಿತ ಹಾಗೂ ತೆಳು ಸಿಪ್ಪೆಯ ಹಣ್ಣುಗಳನ್ನು ಆಯ್ಕೆ ಮಾಡಲಾಗಿದೆ.

 

ಬೇಸಾಯ ಕ್ರಮಗಳು:

ಸಸಿಗಳು: 6.0 ಮೀ. X 6.0 ಮೀ. ಅಂತರದಲ್ಲಿ ಪ್ರತಿ ಎಕರೆಗೆ 111 ಸಸಿಗಳು ಬೇಕಾಗುತ್ತವೆ.

 

ಕೊಟ್ಟಿಗೆ ಗೊಬ್ಬರ (ಕಾಂಪೋಸ್ಟ್):

ನಾಟಿಗೆ ಮುಂಚೆ ಪ್ರತಿ ಗಿಡಕ್ಕೆ 15 ಕಿ.ಗ್ರಾಂ. ನಾಟಿ ಮಾಡಿದ ಮೊದಲನೇ ವರ್ಷ 5 ಕಿ.ಗ್ರಾಂ. ಎರಡನೇ ವರ್ಷ 10 ಕಿ.ಗ್ರಾಂ. ಮೂರನೇ ವರ್ಷ 15 ಕಿ.ಗ್ರಾಂ., ನಾಲ್ಕನೆಯ ವರ್ಷ 20 ಕಿ.ಗ್ರಾಂ. ಐದನೇ ವರ್ಷ 25 ಕಿ.ಗ್ರಾಂ. 6ನೇ ವರ್ಷದ ನಂತರ 30 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು.

 

ರಾಸಾಯನಿಕ ಗೊಬ್ಬರಗಳು:

 

ರಾಸಾಯನಿಕ ಗೊಬ್ಬರಗಳು

ಸಾರಜನಕ

ರಂಜಕ

ಪೊಟ್ಯಾಷ್

(ಗ್ರಾಂ./ ಪ್ರತಿ ಗಿಡಕ್ಕೆ )

ಮೊದಲನೇ ವರ್ಷ

100

60

100

ಎರಡನೇ ವರ್ಷ

200

120

200

ಮೂರನೇ ವರ್ಷ

300

180

300

ನಾಲ್ಕನೇ ವರ್ಷ

400

240

400

ಐದನೇ ವರ್ಷ ಹಾಗೂ ನಂತರ

500

300

500

 

 

 

ನಾಟಿ ಮಾಡುವುದು:

ಬೆಳೆ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು. ಶಿಫಾರಸ್ಸು ಮಾಡಿದ ಅಂತರದಲ್ಲಿ 2.5 ಘನ ಫೂಟ್ ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣ ಹಾಕಿ ತುಂಬಬೇಕು. ನಂತರ ಸಸಿಗಳನ್ನು ಗುಣಿಯ ಮಧ್ಯದಲ್ಲಿ ನಾಟಿ ಮಾಡಿ ನೀರು ಹಾಯಿಸಬೇಕು. ಕೂಡಲೇ ಸಸಿಗಳನ್ನು ಕೋಲಿನ ಆಸರೆ ಕೊಟ್ಟು ಕಟ್ಟಬೇಕು. ಗಿಡ 2 ಫೂಟ್ ಎತ್ತರ ಬೆಳೆಯುವವರೆಗೂ ಪಕ್ಕದಲ್ಲಿ ಬರುವ ಕವಲುಗಳನ್ನು ತೆಗೆಯುತ್ತಿರಬೇಕು. ನಿಯಮಿತವಾಗಿ ಪಾತಿಗಳಲ್ಲಿಯ ತೆಗೆಯುತ್ತಿರಬೇಕು.

 

 ಗೊಬ್ಬರ ಕೊಡುವುದು:

 ಜೂನ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ಗಿಡಗಳ ವಯಸ್ಸಿಗನುಗುಣವಾಗಿ ಗಿಡದ ಸುತ್ತಲೂ ವಯಸ್ಸಿಗೆ ಅನುಗುಣವಾಗಿ 60 ರಿಂದ 100 ಸೆಂ.ಮೀ. ದೂರದಲ್ಲಿ ವೃತ್ತಾಕಾರದ ತಗ್ಗು ತೆಗೆದು ಅದರಲ್ಲಿ ರಸಗೊಬ್ಬರವನ್ನು ಹಾಕಬೇಕು. ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಮೂರು ಸಮ ಕಂತುಗಳಲ್ಲಿ ಹೊಸ ಬೆಳವಣಿಗೆಯ ಸಮಯದಲ್ಲಿ ಅಂದರೆ ಮಾರ್ಚ್-ಏಪ್ರಿಲ್, ಜೂನ್ (ಮಳೆಗಾಲಕ್ಕೆ ಮೊದಲು) ಮತ್ತು ಸೆಪ್ಟೆಂಬರ್-ಅಕ್ಟೋಬರ್ (ಮಳೆಗಾಲದ ನಂತರ) ತಿಂಗಳುಗಳಲ್ಲಿ ಒದಗಿಸಬೇಕು. ಲಘು ಪೋಷಕಾಂಶಗಳನ್ನು ಪೂರೈಸಲು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಿಂಬೆ ಸ್ಪೆಷಲ್ ಅನ್ನು ಬೆರೆಸಿ ಸಿಂಪಡಿಸಬೇಕು. ನಿಂಬೆ ಸ್ಪೆಷಲ್ ಸಿಂಪರಣೆಯಿಂದ ಹೆಚ್ಚಿನ ಇಳುವರಿಯನ್ನು ಪಡೆಯುವುದರ ಜೊತೆಗೆ ಉಚ್ಚ ಗುಣಮಟ್ಟದ ಫಸಲನ್ನು ಪಡೆಯಬೇಕು.

 

ನಿಂಬೆಯಲ್ಲಿ ಹೂ ಉದುರುವುದನ್ನು ತಡೆಯಲು ಎನ್.ಎ.ಎ.ಯನ್ನು 10-15 ಪಿ.ಪಿ.ಎಮ್.    (10-15 ಮಿ.ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ) ಪ್ರಮಾಣದಲ್ಲಿ ಹೂ ಬಿಡಲು ಪ್ರಾರಂಭವಾದಾಗ ಸಿಂಪಡಿಸಬೇಕು.

 

 

ನೀರು ನಿರ್ವಹಣೆ:

ನಿಂಬೆಯನ್ನು ನಾಟಿ ಮಾಡಿದ ನಂತರ ನಿಯಮಿತವಾಗಿ ನೀರನ್ನು ಒದಗಿಸಿದಲ್ಲಿ ಗಿಡಗಳ ಬೆಳವಣಿಗೆಗೆ, ಹೂ ಬಿಡುವಿಕೆಗೆ ಹಾಗೂ ಹಣ್ಣುಗಳ ಬೆ ಳ ವ ಣಿ ಗೆ ಗೆ, ಸಹಾಯಕವಾಗುವುದು. ಕಾಯಿ ಬೆಳವಣಿಗೆ ಹಂತದಲ್ಲಿ ಸಂಪೂರ್ಣವಾಗಿ ನೀರು ಕೊಟ್ಟರೆ ಕಾಯಿಗಳ ಗುಣಮಟ್ಟ ಹೆಚ್ಚುವುದಲ್ಲದೆ, ಕಾಯಿಗಳು ರಸದಿಂದ ತುಂಬಿರುತ್ತವೆ. ಮಣ್ಣು ಮತ್ತು ಹವಾಗುಣಕ್ಕಾನುಗುಣವಾಗಿ 7 ರಿಂದ 10 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಗಿಡಕ್ಕೆ 20 ರಿಂದ 30ಲೀ ನೀರು ಒದಗಿಸಿದರೆ ಉತ್ತಮ ಇಳುವರಿ ಬರುತ್ತದೆ.

 

ಕಳೆ ನಿಯಂತ್ರಣ:

               ನಿಂಬೆ ತೋಟದಲ್ಲಿ ಏಕದಳ / ದ್ವಿದಳ ಕಳೆಗಳನ್ನು ನಿಯಂತ್ರಿಸಲು ಕಳೆ ಬರುವ ಪೂರ್ವದಲ್ಲಿ ಡೈಯೂರಾನ್ 800 ಗ್ರಾಂ ಪ್ರತಿ ಎಕರೆಗೆ ಮತ್ತು ಕಳೆ ಬಂದ ನಂತರ ಗೋಮೋಸೇಟ್ 10 ಮಿ.ಲೀ/ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು

 

ಇತ್ತೀಚಿನ ನವೀಕರಣ​ : 12-11-2020 02:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080